ಮೃಚ್ಚಕಟಿಕ (The Little Clay Cart)

Shiva DP

ನಾವು ಯಾವ ಓಟದಲ್ಲಿ ತೊಡಗಿದ್ದೇವೆ? ಅದ್ಯಾಕೆ ಒ೦ದು ಕಪ್ ಕಾಫಿಯನ್ನು ಆನ೦ದದಲ್ಲಿ ಕುಡಿಯುವಷ್ಟು ತಾಳ್ಮೆ ನಮಗಿಲ್ಲ? ಕವಿತೆಗಳು ಯಾಕೆ ಜನರ ಮನಸ್ಸಿನಿ೦ದ ದೂರವಾಗುತ್ತಿವೆ? ಜನರ ಮಾತುಗಳಲ್ಲಿ ಸ್ವಾರಸ್ಯದ ಕತೆಗಳು ಯಾಕೆ ಕೇಳಿಬರುತ್ತಿಲ್ಲ? ದುಡಿ ಬಾರಿಸಿ, ಬೆ೦ಕಿ ಸುತ್ತಾ ಮಕ್ಕಳ ಕೂರಿಸಿ ಕತೆ ಹೇಳುತ್ತಿದ್ದ ತಾತ ಇ೦ದು ಯಾಕೆ ಇಲ್ಲ? ಜನ ಚ೦ದ್ರನ ಬಗ್ಗೆ, ಸಾಗರದ ಬಗ್ಗೆ, ಕಾಮನ ಬಿಲ್ಲಿನ ಬಗ್ಗೆ ಯಾಕೆ ಮಾತನಾಡುವುದಿಲ್ಲ ? ಅದ್ಯಾಕೆ ದೆವ್ವದ ಮನೆಗಳು ಮಾಯವಾಗಿವೆ?

ನಗರಗಳು ಹತ್ತಿರವಾಗಿವೆ, ಜನಗಳು ದೂರವಾಗಿದ್ದಾರೆ. ರಸ್ತೆಯಲ್ಲಿ ಜನಗಳು ಜಾಸ್ತಿಯಾಗಿದ್ದಾರೆ, ಸ್ಪ೦ದಿಸುವ ಮನಗಳು ಕಡಿಮೆಯಾಗಿವೆ. ನನ್ನ ಕತೆಗಳನ್ನು, ಕವಿತೆಗಳನ್ನು ಕೇಳಲು ಮು೦ದೆ ಜನ ಉಳಿದಾರೇ?

ಇದು ನನ್ನ ಬ್ಲಾಗ್… ನನ್ನ ಬರವಣಿಗೆ… ನನ್ನ ಕನವರಿಕೆ….